• +91-7023509999
  • 0294-6622222
  • info@narayanseva.org
  • Home
  • ಸ್ಮಾರ್ಟ್ ವಿಲೇಜ್
Service of oppressed humanity

ನಾವು ಚಿಕಿತ್ಸೆ ನೀಡುತ್ತೇವೆ। ನಾವು ತರಬೇತಿ ನೀಡುತ್ತೇವೆ। ನಾವು ಸೇವೆ ಮಾಡುತ್ತೇವೆ।

ದೀನರು, ಅಸಹಾಯರು, ಅಗತ್ಯವಿರುವವರು ಮತ್ತು ದಿವ್ಯಾಂಗರ ಸೇವೆಯೇ ನಿಜವಾದ ದೇವರ ಸೇವೆಯಾಗಿದೆ.

ಸ್ಮಾರ್ಟ್ ವಿಲೇಜ್ ಬಗ್ಗೆ

Narayan Seva Sansthan ಇದರ “The Smart Village”(ದ ಸ್ಮಾರ್ಟ್ ವಿಲೇಜ್) ರಾಜಸ್ಥಾನದ ಅತ್ಯಂತ ಪ್ರಸಿದ್ಧ ಸರೋವರಗಳ ನಗರದ ಹತ್ತಿರ ಇರುವ ಒಂದು ಚಿಕ್ಕ ಹಳ್ಳಿಯಲ್ಲಿದೆ. ದೈಹಿಕವಾಗಿ ದುರ್ಬಲವಾಗಿರುವ ಸಾವಿರಾರು ಜನರಿಗೆ ಇಲ್ಲಿ ಹೊಸ ಬಾಳನ್ನು ಕೊಡಲಾಗುತ್ತದೆ. ವಿಶೇಷ ಸೇವೆಗಾಗಿ ಪದ್ಮಶ್ರೀ  ಪಡೆದ ಕೈಲಾಶ್ ಅಗರ್ವಾಲ್ ‘ಮಾನವ’ ಸ್ಥಾಪಿಸಿದ, ವಿಭಿನ್ನವಾಗಿ ಸಾಮರ್ಥ್ಯ ಹೊಂದಿರುವವರು(ವಿಕಲಚೇತನರು) ಆವರಣದಿಂದ ಹೊರಬಂದಾಗ ತಮ್ಮ ಕಾಲುಗಳ ಮೇಲೆ ನಿಂತು ಜೀವನೋಪಾಯವನ್ನು ಗಳಿಸಲು ಪ್ರಾರಂಭಿಸಬಹುದು ಎಂದು ಖಚಿತಪಡಿಸಿಕೊಳ್ಳುವುದು ಈ ಸಂಸ್ಥೆಯ ಏಕೈಕ ಉದ್ದೇಶವಾಗಿದೆ.

ಅವರ ಚಿಕಿತ್ಸೆಯ ಸಮಯದಲ್ಲಿ, ಅವರು ನ್ಯೂನತೆ ಸರಿಪಡಿಸುವ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಪಡೆಯುವುದು ಮಾತ್ರವಲ್ಲ, ಅವರು ಸ್ವಾವಲಂಬಿಗಳಾಗುವುದನ್ನು ಖಚಿತಪಡಿಸಿಕೊಳ್ಳಲು ಕಂಪ್ಯೂಟರ್ ಮತ್ತು ಮೊಬೈಲ್‌ಗಳನ್ನು ಸರಿಪಡಿಸಲು ಅಥವಾ ಹೊಲಿಗೆ ಕಲೆಯನ್ನು ಕಲಿಯಲು ತರಬೇತಿ ನೀಡಲಾಗುತ್ತದೆ. ಕಾಲಾಂತರದಲ್ಲಿ, ಈ ಸಂಸ್ಥೆಯು ಬೆಳೆದಿದೆ ಮತ್ತು ಈಗ ಪೋಲಿಯೊ ಮತ್ತು ಸೆರೆಬ್ರಲ್ ಪಾಲ್ಸಿಯ 50-60ಕ್ಕೂ ಹೆಚ್ಚು ಸರಿಪಡಿಸುವ ಶಸ್ತ್ರಚಿಕಿತ್ಸೆಗಳು ಪ್ರತಿದಿನವೂ ಆಗುವ ವಿಶ್ವದ ಕೆಲವು ಕೇಂದ್ರಗಳಲ್ಲಿ ಇದು ಒಂದಾಗಿದೆ.

ಇದು ರೋಗಿಗಳಿಗೆ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ, ಅವರ ಸಂಬಂಧಿಕರ ಅವಶ್ಯಕತೆಗಳನ್ನು ಸಹ ನೋಡಿಕೊಳ್ಳುತ್ತದೆ. ಅವರು ಉದಯಪುರವನ್ನು ತಲುಪಿದ ನಂತರ, ರೋಗಿಗಳು ಮತ್ತು ಅವರ ಜೊತೆಗಿರುವವರು ಚಿಕಿತ್ಸೆಗಾಗಿ ಸಂಸ್ಥೆಯಲ್ಲಿರುವವರೆಗೆ ಎಲ್ಲಾ ವೆಚ್ಚಗಳನ್ನು ಸಂಸ್ಥೆಯಿಂದ ಭರಿಸಲಾಗುತ್ತದೆ.

Background Image
Ration Distribution
ಸ್ಮಾರ್ಟ್ ವಿಲೇಜ್
ಸೌಲಭ್ಯಗಳು

ನಾರಾಯಣ ಸೇವಾ ಸಂಸ್ಥಾನದ ಆಧುನಿಕ ಸ್ಮಾರ್ಟ್ ಗ್ರಾಮವು ವಿಭಿನ್ನ ದಕ್ಷತೆ ಹೊಂದಿರುವ ಮತ್ತು ವಂಚಿತ ವ್ಯಕ್ತಿಗಳಿಗಾಗಿ ಉಚಿತ ಆರೋಗ್ಯ ಸೇವೆ, ಶಿಕ್ಷಣ, ಪುನರ್ವಸತಿ, ಕೌಶಲ್ಯ ತರಬೇತಿ ಮತ್ತು ಬೆಂಬಲ ಸೇವೆಗಳನ್ನು ಒದಗಿಸುತ್ತದೆ.

ಒಂದು ಉತ್ತಮ ಪ್ರಪಂಚವನ್ನು ನಿರ್ಮಿಸುವುದು

ವಿಕಲಚೇತನರಿಗೆ ಉತ್ತಮ ಜಗತ್ತನ್ನು ನಿರ್ಮಿಸುವುದು ಯಾವಾಗಲೂ ನಮ್ಮ ಚಾರಿಟೇಬಲ್ ಟ್ರಸ್ಟ್‌ ನ ಪ್ರಧಾನ ಗುರಿಯಾಗಿದೆ. ಈ ಆವರಣ ಜೀವಂತ ರೂಪದಲ್ಲಿ ಆ ಗುರಿಯ ಸಣ್ಣ ಪ್ರತಿಬಿಂಬವಾಗಿದೆ.

    • ಪ್ರತಿದಿನ 50-60 ಕ್ಕೂ ಹೆಚ್ಚು ಉಚಿತ-ವೆಚ್ಚದ ಸರಿಪಡಿಸುವ ಶಸ್ತ್ರಚಿಕಿತ್ಸೆಗಳು
    • ರೋಗಿಗಳು ಮತ್ತು ಅವರ ಜೊತೆಗಿರುವವರೆಗೆ ವಸತಿ ಮತ್ತು ಆಹಾರ
    • ಉಚಿತ ಫಿಸಿಯೋಥೆರಪಿ ಕೇಂದ್ರ
    • ನಾರಾಯಣ ಕೃತಕ ಅಂಗಗಳನ್ನು ತಯಾರಿಸಲು ಸುಧಾರಿತ ಕಾರ್ಯಾಗಾರ
    • ಸಂಪೂರ್ಣವಾಗಿ ಸುಸಜ್ಜಿತವಾದ ವೃತ್ತಿಪರ ತರಬೇತಿ ಕೇಂದ್ರ
Smart Village Video
ಚಿತ್ರ ಗ್ಯಾಲರಿ
ಚಾಟ್ ಪ್ರಾರಂಭಿಸಿ